ಎಲ್ಲರಿಗೂ ನಮಸ್ಕಾರ.
ನನ್ನ ಪ್ರಕಾರ, ಎಲ್ಲರ ಮನಸ್ಸಿನಲ್ಲೂ ಒಬ್ಬ ಕವಿ ಇದ್ದೇ ಇದ್ದಾನೆ. ಅವ ಎಲ್ಲಾ ಸಮಯದಲ್ಲಿ ಹೊರಗೆ ಬರದೆ ಇರಬಹುದು. ನೀವು ಬರೆದ ಕವನ ಇರಬಹುದು,ಚುಟುಕು ಇರಬಹುದು, ಅದನ್ನ ಇಲ್ಲಿ ಬರೆಯಿರಿ. ನಾಲ್ಕು ಜನಕ್ಕೆ ನಿಮ್ಮ ಪ್ರತಿಭೆ ಗೊತ್ತಾಗ್ಲಿ ಏನಂತಿರಾ? ದಯವಿಟ್ಟು ಅಶ್ಲೀಲ ಕವನಗಳಿಂದ ಇದನ್ನ ದೂರ ಇಡಿ.
ನನ್ನ ಒಂದೆರಡು ಚುಟುಕದಿಂದ ಶುರು ಮಾಡುತ್ತೇನೆ.
ಓ ನನ್ನ ನಲ್ಲೆ
ನಿನ್ನ ನಗುವಲ್ಲೇ ನಾ ಮನಸೋತೆನಲ್ಲೆ
ಮನಸೋತು ಎಚ್ಚರ ತಪ್ಪಿ ಬಿದ್ದೆನಲ್ಲೆ
ಈಗ ತಾನೆ ಎಚ್ಚರಗೊಳ್ಳುವುದರಲ್ಲಿದ್ದೆನಲ್ಲೆ
ಆದರೆ ನೀ ಮತ್ತೆ ನಕ್ಕುಬಿಟ್ಟೆಯಲ್ಲೆ, ಓ ನನ್ನ ನಲ್ಲೆ?
ಚಲನಚಿತ್ರ
ಇತ್ತೀಚೆಗೆ ನಾ ನೋಡಿದೆ ಒಂದು ಚಲನಚಿತ್ರ
ಅದರಲ್ಲಿ ಎಲ್ಲಾ ಚಿತ್ರ ವಿಚಿತ್ರ
ಎಲ್ಲರ ಕೈಯಲ್ಲೂ ಮಚ್ಚು,ಲಾಂಗು
ಹೆದರಿ ನಾ ಓಡಿದೆ ಒಂದು ಫರ್ಲಾ೦ಗು
ನಗು
ನಿನ್ನ ನಗುವ ಸೆರೆ ಹಿಡಿದಿದ್ದೆ ನನ್ನ Computerನಲ್ಲಿ
ಅದು Delete ಆಗಿತ್ತು Formatiನಲ್ಲಿ
ನೀ ಚಿಂತಿಸದಿರು ಓ ನನ್ನ ನಲ್ಲೆ
ಅದು ಎಂದೋ store ಆಗಿತ್ತು ನನ್ನ ಹೃದಯದಲ್ಲೇ
ನನ್ನತನ
ನಿನ್ನ ಮರೆಯಲೆಂದು ಸಿಗರೇಟು ಸೇದುವುದ ಕಲಿತೆ, ವಿಸ್ಕಿ ಕುಡಿಯುವುದ ಕಲಿತೆ
ಒಟ್ಟಾರೆ ನಿನ್ನ ಮರೆಯಲು ಹೋಗಿ ನನ್ನತನವ ನಾ ಮರೆತೆ
2 comments:
'O nanna nalle' chennagi ide ...
Post a Comment