Friday, April 06, 2007

ನಾನೊಂದು ನಾನ್ ತಿಂದೆ.

ನಿನ್ನೆ ಬಸವನಗುಡಿಯ ಕಾಮತ್ ಬ್ಯೂಗಲ್ ರಾಕ್ ನಲ್ಲಿ ನಮ್ಮ ಬಾಸ್ ಅವರ ಬರ್ತಡೆ ಪಾರ್ಟಿ ಇತ್ತು. ನಾನು, ಕಾಶಿ, ಜೆಸಿ, ಜ್ಯೋತಿ, ಪದಿ, ಆದು, ಜಗ್ಗಣ್ಣ ಹೀಗೆ ಸುಮಾರು ಹತ್ತು ಜನ ಸೇರಿದ್ದೆವು. ಫಸ್ಟ್ ಫ್ಲೋರಿನ ಒಂದು ರೌಂಡ್ ಟೇಬಲ್ಲಿನಲ್ಲಿ ಕುಳಿತು ಸುತ್ತಲೂ ಸೇರಿದ್ದ ಬಿ.ಎಂ.ಎಸ್. ಕಾಲೇಜಿನ ಹಕ್ಕಿಗಳ ಸೌಂದರ್ಯ ವಿಮರ್ಶೆ ಮಾಡುತ್ತಾ ಕುಳಿತಿದ್ದೆವು.

ಸಪ್ಲೈಯರ್ ಬಂದು "ಏನು ಬೇಕು ಸರ್?" ಅಂದ. "ಏನಿದೆ?" ಅಂತ ಕೇಳಿದ್ದಕ್ಕೆ "ನಾನ್ ಇದೆ" ಅಂದ. ಪಕ್ಕದಲ್ಲಿದ್ದ ಜಗ್ಗಣ್ಣ "ನನಗೊಂದು ನಾನ್" ಅಂದ. ನನಗೆ ಅವರಿಬ್ಬರ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ಸಮಯದ ನಂತರ ತಿಳಿಯಿತು ಅದೊಂದು ರೊಟ್ಟಿ ತರಹದ ತಿಂಡಿ ಎಂದು. ದರ್ಶಿನಿ, ಸಾಗರಗಳಲ್ಲಿ ಇಡ್ಲಿ ಸಾಂಬಾರ್ ತಿನ್ನುವವನಿಗೆ ಇದೆಲ್ಲಿಂದ ಗೊತ್ತಿರಬೇಕು?

ಅದಕ್ಕೆ ಆ ಹೆಸರು ಇಟ್ಟ ಪುಣ್ಯಾತ್ಮನ ವಿಚಾರ ಏನಿತ್ತೋ ಏನೋ? "ನಾನು" ಎನ್ನುವುದು ಅಹಂಕಾರದ ಪ್ರತೀಕ, ಅದನ್ನ ತಿಂದು ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದೆಂದೋ ಅಥವಾ ತಿಂದು ಹೆಚ್ಚುಮಾಡಿಕೊಳ್ಳುವುದೆಂದೋ? ತಿಳಿದವರು ಹೇಳಿದರೆ ಒಳಿತು.

ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋದಾಗ ಅಮ್ಮ "ಊಟ ಆಯಿತಾ ಮಗಾ?" ಅಂತ ಕೇಳಿದಳು. "ಊಟ ಮಾಡಿಲ್ಲೆ, ನಾನೊಂದು ನಾನು ತಿಂದೆ" ಅಂದೆ. ಅಮ್ಮನಿಗೆ ಅರ್ಥವಾಗದೆ "ಏನಾದರೂ ತಿನ್ನು ಈಗ ನನ್ನ ತಲೆ ತಿನ್ನಬೇಡ ಬಿದ್ಕ ಸುಮ್ನೆ" ಅಂದಳು.

2 comments:

Sushrutha Dodderi said...

ಹಿಹ್ಹಿಹ್ಹಿ.. ಚನಾಗ್ ಬರದ್ದೆ!

ನಾನ್ ತಿಂದ್ರೆ ಅಹಂಕಾರ ಹೆಚ್ಚು-ಕಮ್ಮಿ ಆಗೋದು ಕಾಣ್ಲೆ. ಸಬ್ಜಿಗೆ ಖಾರ ಹೆಚ್ಚು-ಕಮ್ಮಿ ಆಗಿ ಹೋಟ್ಲಿನವರ ಹತ್ರ ಗಲಾಟಿ ಮಾಡಿದ್ದು ಇದ್ದು... :)

Samarasa said...

sooper agide idu chennagi bariteeri